OpenAI

ಅಕ್ಟೋಬರ್ 21, 2026

ಉತ್ಪನ್ನ

1 ಲಕ್ಷಕ್ಕೂ ಹೆಚ್ಚಿನ ಜಾಹೀರಾತುದಾರರು ಬಳಸಿರುವ ChatGPT ಜಾಹೀರಾತುಗಳು ಈಗ 26 ಹೊಸ ದೇಶಗಳಲ್ಲಿ ಈಗ ಲಭ್ಯವಿದೆ

ChatGPT ಯಲ್ಲಿ ಜನರು ಏನು ಖರೀದಿಸಬೇಕೆಂದು ಹುಡುಕುತ್ತಾ, ಆಯ್ಕೆಗಳನ್ನು ಹೋಲಿಸಿ ನಿರ್ಧರಿಸುವಾಗ, ಸ್ಥಳೀಯ ವ್ಯಾಪಾರಗಳಿಂದ ಜಾಗತಿಕ ಬ್ರ್ಯಾಂಡ್‌ಗಳವರೆಗೆ ಇನ್ನಷ್ಟು ಜಾಹೀರಾತುದಾರರು ಈಗ ಅವರನ್ನು ತಲುಪಬಹುದು.

ಪ್ರತಿ ವಾರ 120 ಕೋಟಿಗೂ ಹೆಚ್ಚಿನ ಜನರು ಆಲೋಚನೆಗಳನ್ನು ಅನ್ವೇಷಿಸಲು, ಆಯ್ಕೆಗಳನ್ನು ಹೋಲಿಸಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ChatGPT ಬಳಸುತ್ತಾರೆ. ಜನರು ತಮ್ಮ ಅಗತ್ಯಗಳಿಗೆ ಹೊಂದುವ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಜಾಹೀರಾತುಗಳು ಸಹಾಯ ಮಾಡಬಲ್ಲವು. ಬೇರೆ ರೀತಿಯಲ್ಲಿ ಅವರ ಗಮನಕ್ಕೆ ಬಾರದಿರಬಹುದಾದ ಆಯ್ಕೆಗಳೂ ಇದರಲ್ಲಿ ಸೇರಿವೆ.

ನಾವು ಜಾಹೀರಾತುಗಳನ್ನು ಪ್ರಾರಂಭಿಸಿ ಎಂಟು ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯವಾಗಿದೆ. ಅಂದಿನಿಂದ 1 ಲಕ್ಷಕ್ಕೂ ಹೆಚ್ಚಿನ ಜಾಹೀರಾತುದಾರರು ChatGPT ಯಲ್ಲಿ ಜಾಹೀರಾತು ಅಭಿಯಾನಗಳನ್ನು ನಡೆಸಿದ್ದಾರೆ. ಇಂದು ನಾವು ChatGPT ಜಾಹೀರಾತುಗಳನ್ನು ಇನ್ನೂ 26 ದೇಶಗಳಿಗೆ ವಿಸ್ತರಿಸುತ್ತಿದ್ದೇವೆ. ಇದರೊಂದಿಗೆ ಅವುಗಳು ವಿಶ್ವದಾದ್ಯಂತ 89 ದೇಶಗಳಲ್ಲಿ ಲಭ್ಯವಾಗಲಿವೆ. ಇತ್ತೀಚೆಗೆ ಯುರೋಪ್ ಮತ್ತು ಆಗ್ನೇಯ ಏಷ್ಯಾ ಮತ್ತು ತೈವಾನ್ ಪ್ರದೇಶಗಳಿಗೆ ವಿಸ್ತರಿಸಿದ ಬಳಿಕ ಇದು ನಮ್ಮ ಮುಂದಿನ ಹೆಜ್ಜೆಯಾಗಿದೆ.

ವಿಶ್ವದಾದ್ಯಂತ ಜನರಿಗೆ ChatGPT ಯನ್ನು ಉಚಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಒದಗಿಸಲು ಜಾಹೀರಾತುಗಳು ಸಹಾಯ ಮಾಡುತ್ತವೆ. ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ ಇಡೀ ಮನುಕುಲಕ್ಕೆ ಪ್ರಯೋಜನವಾಗುವಂತೆ ಖಚಿತಪಡಿಸಿಕೊಳ್ಳುವುದು ನಮ್ಮ ಧ್ಯೇಯವಾಗಿದೆ. ಜಾಹೀರಾತುಗಳು Free ಮತ್ತು Go ಯೋಜನೆಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. Plus, Pro ಮತ್ತು ಎಂಟರ್‌ಪ್ರೈಸ್ ಸಬ್‌ಸ್ಕ್ರಿಪ್ಶನ್‌ಗಳು ಜಾಹೀರಾತು ರಹಿತವಾಗಿಯೇ ಉಳಿಯುತ್ತವೆ.

ವಿಶ್ವದಾದ್ಯಂತ ಇನ್ನಷ್ಟು ವ್ಯಾಪಾರಗಳಿಗೆ ಬೆಂಬಲ

ಮೆಕ್ಸಿಕೊ ಮತ್ತು ಬ್ರೆಜಿಲ್‌ನಲ್ಲಿ ಪ್ರಾರಂಭಿಸಿದ ಬಳಿಕ, ನಾವು ಅರ್ಜೆಂಟೀನಾ, ಚಿಲಿ, ಕೊಲಂಬಿಯಾ ಮತ್ತು ಪೆರು ಸೇರಿದಂತೆ ಲ್ಯಾಟಿನ್ ಅಮೆರಿಕದ ಇನ್ನೂ 14 ದೇಶಗಳಿಗೆ ChatGPT ಜಾಹೀರಾತುಗಳನ್ನು ತರುತ್ತಿದ್ದೇವೆ. ನೈಜೀರಿಯಾ, ದಕ್ಷಿಣ ಆಫ್ರಿಕಾ, ಸೆರ್ಬಿಯಾ, ಉಕ್ರೇನ್, ಕಾಂಬೋಡಿಯಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ ಯುರೋಪ್, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ಏಷ್ಯಾದ ಇನ್ನಷ್ಟು ಮಾರುಕಟ್ಟೆಗಳಲ್ಲಿಯೂ ನಾವು ಪ್ರಾರಂಭಿಸುತ್ತಿದ್ದೇವೆ.

ಈ ದೇಶಗಳಲ್ಲಿ ಜಾಹೀರಾತುದಾರರು ತಂತ್ರಜ್ಞಾನ ಪಾಲುದಾರರ ಮೂಲಕ ಅಥವಾ ಜಾಹೀರಾತು ವ್ಯವಸ್ಥಾಪಕ⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ)ದಲ್ಲಿನ ಸ್ವಯಂ-ಸೇವಾ ಸೌಲಭ್ಯದ ಮೂಲಕ ChatGPT ಜಾಹೀರಾತುಗಳನ್ನು ಬಳಸಬಹುದು.

ಜನರು ತಮ್ಮ ಆಯ್ಕೆಗಳನ್ನು ಅನ್ವೇಷಿಸುವಾಗ ಅವರನ್ನು ತಲುಪಿ

ChatGPT ಯಲ್ಲಿ ಜನರು ತಾವು ಏನನ್ನು ಹುಡುಕುತ್ತಿದ್ದಾರೆ ಎಂಬುದನ್ನು ವಿವರಿಸಬಹುದು, ಪೂರಕ ಪ್ರಶ್ನೆಗಳನ್ನು ಕೇಳಬಹುದು ಮತ್ತು ಸಂಭಾಷಣೆಯ ಮೂಲಕ ತಮ್ಮ ಆಯ್ಕೆಗಳನ್ನು ಪರಿಷ್ಕರಿಸಿಕೊಳ್ಳಬಹುದು. ಮೊದಲ ಬಾರಿಗೆ ಮ್ಯಾರಥಾನ್ ಓಟಕ್ಕೆ ತರಬೇತಿ ಪಡೆಯುತ್ತಿರುವವರು, ಸ್ಪರ್ಧೆಯ ವಾರದಲ್ಲಿ ಯಾವ ಊಟ ಮಾಡಬಹುದು ಎಂದು ಹುಡುಕುವುದರಿಂದ ಆರಂಭಿಸಬಹುದು. ನಂತರ ತಮ್ಮ ಆಹಾರದ ಆದ್ಯತೆಗಳು ಮತ್ತು ಅಡುಗೆ ಮಾಡಲು ಇರುವ ಸಮಯಕ್ಕೆ ತಕ್ಕಂತೆ ಆಯ್ಕೆಗಳನ್ನು ಸೀಮಿತಗೊಳಿಸಬಹುದು. ಆ ಸಂಭಾಷಣೆಗೆ ಸಂಬಂಧಿಸಿದ ಜಾಹೀರಾತೊಂದು, ಅವರು ಈ ಮೊದಲು ಪರಿಗಣಿಸಿರದ ದಿನಸಿ ವಿತರಣಾ ಸೇವೆಯನ್ನು ಪರಿಚಯಿಸಬಹುದು.

ಜನರು ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತಾ ತಮಗೆ ಯಾವುದು ಸೂಕ್ತ ಎಂದು ನಿರ್ಧರಿಸುವ ಈ ಹಂತದಲ್ಲಿ, ಸ್ಥಳೀಯ ವ್ಯಾಪಾರಗಳು, ಪ್ರಾದೇಶಿಕ ಬ್ರ್ಯಾಂಡ್‌ಗಳು ಮತ್ತು ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ChatGPT ಜಾಹೀರಾತುಗಳು ಅವಕಾಶ ನೀಡುತ್ತವೆ.

“L’Oreal ನಲ್ಲಿ ನಮ್ಮ ಸಂಸ್ಕೃತಿ ಎಂದರೆ ‘ಹೊಸದಾಗಿ ಮೂಡಿಬರುವ ಅವಕಾಶಗಳನ್ನು ಬಳಸಿಕೊಳ್ಳುವುದು’ ಎಂಬುದಾಗಿದೆ. ಇಂದು ಕೋಟ್ಯಾಂತರ ಗ್ರಾಹಕರು ಸೌಂದರ್ಯಕ್ಕೆ ಸಂಬಂಧಿಸಿದ ಹೊಸ ವಿಷಯಗಳನ್ನು ಹುಡುಕಲು ಮತ್ತು ಅನ್ವೇಷಿಸಲು AI ಮಾಡೆಲ್‌ಗಳನ್ನು ಬಳಸುತ್ತಿದ್ದಾರೆ. ಅವರಿಗೆ ನಿಜವಾದ ಪ್ರಯೋಜನಗಳನ್ನು ಒದಗಿಸುವುದು ಮತ್ತು ಅವರೊಂದಿಗೆ ಇನ್ನಷ್ಟು ಆಪ್ತ ಸಂಬಂಧಗಳನ್ನು ಬೆಳೆಸುವುದು ನಮ್ಮ ಧ್ಯೇಯವಾಗಿ ಮುಂದುವರಿದಿದೆ. ಸೌಂದರ್ಯ ಉತ್ಪನ್ನಗಳ ಶೋಧನೆ ಮತ್ತು ಮೌಲ್ಯಮಾಪನದಿಂದ ಹಿಡಿದು, ಸ್ವಯಂಚಾಲಿತ ಡಿಜಿಟಲ್ ಖರೀದಿಯವರೆಗೆ OpenAI ನೊಂದಿಗೆ ಆರಂಭಿಕ ಹಂತದಲ್ಲೇ ಪ್ರಯೋಗಗಳನ್ನು ನಡೆಸುವುದು ನಮಗೆ ಹೊಸ ಮತ್ತು ಉಪಯುಕ್ತ ಅನುಭವಗಳನ್ನು ರೂಪಿಸಲು ಹಾದಿ ಮಾಡಿಕೊಡುತ್ತದೆ. ಇದು, ಸೌಂದರ್ಯಕ್ಕೆ ಸಂಬಂಧಿಸಿದ ಚರ್ಚೆಗಳು ಎಲ್ಲಿಯೇ ನಡೆದರೂ, L’Oréal ಸಂಸ್ಥೆಯು ಅತ್ಯಂತ ವಿಶ್ವಾಸಾರ್ಹ ಹಾಗೂ ಪರಿಣಿತ ದನಿಯಾಗಿ ಮುಂಚೂಣಿಯಲ್ಲಿರುವುದನ್ನು ಖಚಿತಪಡಿಸುತ್ತದೆ.”
ಅಸ್ಮಿತಾ ದುಬೆ, L’Oréal ಗ್ರೂಪ್‌ನ CDMO

ನಮ್ಮ ಜಾಹೀರಾತು ತತ್ವಗಳ ಮಾರ್ಗದರ್ಶನದಲ್ಲಿ

ChatGPT ಯ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಕಾಪಾಡುವುದೇ ಜಾಹೀರಾತಿನ ಕುರಿತ ನಮ್ಮ ನಿಲುವಿನ ಅಡಿಪಾಯವಾಗಿದೆ.

OpenAI ನ ಜಾಹೀರಾತು ತತ್ವಗಳ ಮಾರ್ಗದರ್ಶನದಂತೆ, ನಾವು ಸಂಭಾಷಣೆಗಳನ್ನು ಜಾಹೀರಾತುದಾರರಿಗೆ ಬಹಿರಂಗಪಡಿಸದೆ ಗೌಪ್ಯವಾಗಿರಿಸುತ್ತೇವೆ ಮತ್ತು ಗ್ರಾಹಕರ ಡೇಟಾವನ್ನು ಮಾರಾಟ ಮಾಡುವುದಿಲ್ಲ. ChatGPT ಯಲ್ಲಿನ ಜಾಹೀರಾತುಗಳನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತದೆ ಮತ್ತು ಅವುಗಳು ChatGPT ಯ ಉತ್ತರಗಳಿಂದ ಪ್ರತ್ಯೇಕವಾಗಿರುತ್ತವೆ. ChatGPT ನೀಡುವ ಉತ್ತರಗಳ ಮೇಲೆ ಜಾಹೀರಾತುಗಳು ಪ್ರಭಾವ ಬೀರುವುದಿಲ್ಲ.

ಜನರು ತಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸುವಾಗ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾಹೀರಾತುಗಳು ಅವರಿಗೆ ಉಪಯುಕ್ತವಾಗಿರಬೇಕು. ಹಾಗೆಯೇ, ನಮ್ಮಲ್ಲಿ ಜಾಹೀರಾತು ನೀಡುವ ವ್ಯಾಪಾರಗಳಿಗೆ ಅವುಗಳು ಪರಿಣಾಮಕಾರಿಯಾಗಿರಬೇಕು ಎಂಬುದು ನಮ್ಮ ಗುರಿಯಾಗಿದೆ.

ಮುಂದಿನ ಹೆಜ್ಜೆಗಳು

ನಮ್ಮ ತತ್ವಗಳಿಗೆ ಬದ್ಧರಾಗಿಯೇ AI ನ ಸೌಲಭ್ಯವನ್ನು ಇನ್ನಷ್ಟು ಜನರಿಗೆ ತಲುಪಿಸುವತ್ತ ನಮ್ಮ ಗಮನ ಕೇಂದ್ರೀಕೃತವಾಗಿದೆ.

ChatGPT ಜಾಹೀರಾತುಗಳು ಈಗ 89 ದೇಶಗಳಲ್ಲಿ ಲಭ್ಯವಿವೆ. ನಮ್ಮ ಬೆಳವಣಿಗೆಯ ಮುಂದಿನ ಹಂತದಲ್ಲಿ ಹೆಚ್ಚುವರಿ ಜಾಹೀರಾತು ಸ್ವರೂಪಗಳು, ಉದ್ದೇಶಗಳು, ಜಾಹೀರಾತು ಖರೀದಿಯ ಆಯ್ಕೆಗಳು ಮತ್ತು ಫಲಿತಾಂಶಗಳನ್ನು ಅಳೆಯುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಿದ್ದೇವೆ. ChatGPT ಯಲ್ಲಿ ವ್ಯಾಪಾರಗಳು ಗ್ರಾಹಕರೊಂದಿಗೆ ಹೆಚ್ಚು ಸಹಜವಾಗಿ ಸಂವಹನ ನಡೆಸಲು ಹೊಸ ಮಾರ್ಗಗಳನ್ನೂ ನಾವು ಅನ್ವೇಷಿಸುತ್ತಿದ್ದೇವೆ.

ತಮ್ಮ ಅಗತ್ಯಗಳನ್ನು ಅರಿಯಲು, ಆಯ್ಕೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಜನರು ChatGPT ಯನ್ನು ಬಳಸುತ್ತಿದ್ದಾರೆ. ಹೀಗಾಗಿ, ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಅವರಿಗೆ ಸಹಾಯ ಮಾಡುವುದರ ಜೊತೆಗೆ ಎಲ್ಲಾ ಗಾತ್ರದ ವ್ಯಾಪಾರಗಳು ಬೆಳೆದು ಯಶಸ್ವಿಯಾಗಲು ಸಹಾಯ ಮಾಡುವ ಅವಕಾಶವನ್ನು ನಾವು ಕಾಣುತ್ತಿದ್ದೇವೆ.

ChatGPT ಯಲ್ಲಿ ಜಾಹೀರಾತು ನೀಡಲು ಆಸಕ್ತಿ ಇರುವ ವ್ಯಾಪಾರಗಳು ads.openai.com⁠(ಹೊಸ ಕಿಟಕಿಯಲ್ಲಿ ತೆರೆಯುತ್ತದೆ) ನಲ್ಲಿ ಇನ್ನಷ್ಟು ತಿಳಿಯಬಹುದು.

ಲೇಖಕರು

OpenAI